Monday, June 30, 2008

ಚೋಮನ ದುಡಿ - ನಾನು ಓದಿದ ಮೊದಲ ಕಾದಂಬರಿ

ತುಂಬ ದಿನಗಳ ಮುಂಚೆ ಓದಿದ್ದರ ಬಗ್ಗೆ ಈಗ ಬರೆಯುತ್ತಿದ್ದೇನೆ ಅನ್ಕೋಬೇಡಿ, ಇದು ನಾನು ಇತ್ತೀಚಿಗೆ ಓದಿದ ಕಾದಂಬರಿ. ಹೌದು ನಾನು ಇಲ್ಲಿಯವರೆಗೂ ಯಾವ ಭಾಷೆ ಯಲ್ಲೂ ಒಂದು ಸಹ ಕಾದಂಬರಿ ಓದಿರಲ್ಲಿಲ್ಲ. ಅದೇನೋ, ಓದೋದು ಅಂದ್ರೆ ಅಷ್ಟು ಇಷ್ಟ ಇಲ್ಲ ನಂಗೆ. ಅದು ಇಂಗ್ಲಿಷ್ ಓದೋದು ಅಂದ್ರೆ ಕೇಳಲೇಬೇಡಿ. ಈಗ ಸುಮಾರು ದಿವಸಗಳಿಂದ atleast ಕನ್ನಡ ಪುಸ್ತಕಗಳ್ಳನಾದರು ಓದಬೇಕು ಅನ್ನಿಸುತ್ತಿತು. ಆದರೆ ಅದಕ್ಕೆ ಕಾಲ ಕೂಡಿ ಬಂದಿರಲ್ಲಿಲ್ಲ :). ಕೆಲವು ವಾರಗಳ ಹಿಂದೆ ನನ್ನ office ನಲ್ಲಿ ಮಂಜುನಾಥ್ ಅನ್ನುವವರ ಹತ್ರ ಹೋಗಿ ಕೇಳ್ದೆ, ನಿಮ್ ಹತ್ರ ಯಾವ್ದಾದ್ರು ಒಳ್ಳೆ ಕನ್ನಡ ನಾವೆಲ್ ಇದ್ರೆ ಕೊಡಿ ಓದಿ ಕೊಡ್ತಿನಿ ಅಂಥ. ಅದ್ಕೆ ಮಂಜು, ನೋಡೋ ವಾಪಸ್ ಕೊಡೊ ಹಾಗಿದ್ದರೆ ಕೊಡ್ತಿನಿ, ಸುಮಾರು ಜನಕ್ಕೆ ಬುಕ್ ಕೊಟ್ಟು ಕೊಟ್ಟು ಕಳೆದುಹೋಗಿದೆ. ಅಯ್ಯೋ ಗುರು ಖಂಡಿತ ವಾಪಸ್ ಕೊಡ್ತಿನಿ ಅಂಥ ಹೇಳಿದ್ಮೇಲೆ, ತಗೋ ಇದು simple ಆಗಿ ಚೆನ್ನಾಗಿ ಇದೆ, ಓದು ಇಷ್ಟ ಆಗುತ್ತೆ ಅಂಥ ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯನ್ನು ಕೊಟ್ರು.

ಆ ಪುಸ್ತಕ ತುಂಬ ದಪ್ಪ ಏನ್ ಇರಲಿಲ್ಲ. ನಾನು ಓದುವುದಕ್ಕೆ ಅದು motivating factor ಆಯಿತು ಅನ್ನಬಹುದು. ಓದಿ ಹೆಚ್ಚು ಅಭ್ಯಾಸ ಇಲ್ಲದಿದ್ದ ಕಾರಣ, ಜಾಸ್ತಿ ಹೊತ್ತು ಓದುತಿರಲ್ಲ, ಆಗೊಮ್ಮೆ ಈಗೊಮ್ಮೆ ಓದುತಿದ್ದೆ, ದಿನಕ್ಕೆ ಒಂದು ಅಥವ ಎರಡು ಅಧ್ಯಾಯ. ಪದಗಳು ಹೆಚ್ಚ ಕ್ಲಿಷ್ಟ ಇರದ್ದಿದ ಕಾರಣ ಓದಲು ಸುಲಭ ಆಯಿತು. ಹಾಗೆ ಓದ್ತಾ ಓದ್ತಾ ಕಥೆ ಇಷ್ಟ ಆಗೋಕ್ಕೆ ಶುರುವಾಯ್ತು. ಇನ್ ಏನು ಆ chapter ಮುಗಿಬೇಕು, ಕಥೆ ಸ್ವಲ್ಪ ಹೆಚ್ಚು interesting ಆಗುತ್ತಿದೆ ಅನಿಸುತ್ತಿತ್ತು. ಅದು ಮುಂದಿನ chapter ಓದೋಹಾಗೆ ಮಾಡುತಿತ್ತು. ಚೋಮನ ದುಡಿ, ಒಬ್ಬ ಹೊಲೆಯ(ದಲಿತ/ಕೀಳು ಜಾತಿ) ಯವನಾದ ಚೋಮ ಎನ್ನುವವನ ಕಥೆ. ಅವನಿಗೆ ನಾಲ್ಕು ಗಂಡು ಮತ್ತು ಒಬ್ಬ ಹೆಣ್ಣು ಮಗಳು. ಚೋಮ ಮತ್ತು ಅವನ ಮನೆಯವರು ಸಾಹುಕಾರನ ಮನೆಯಲ್ಲಿ ಜೀತ ಮಾಡುತ್ತಾ ತಮ್ಮ ಜೀವನ ವನ್ನು ಕಳೆದವರು. ಚೋಮನಿಗೆ ತಾನು ತನ್ನದೇ ಆದ ಹೊಲದಲ್ಲಿ ವ್ಯವಸಾಯ ಮಾಡಬೇಕೆಂಬ ಆಸೆ. ಅವನ ವರ್ಗದ ಜನನಕ್ಕೆ ಅದು ಎಟಕುವಂತಹುದಲ್ಲ ಎಂದು ಅವನಿಗೆ ಗೊತಿದ್ದರು, ಅದರ ಕನಸನ್ನು ಕಾಣುವುದು ಮಾತ್ರ ಅವನು ಬಿಡುತಿರಲ್ಲಿಲ. ಚೋಮನಿಗೆ ತನ್ನ ದುಡಿ(ಒಂದು ವಾದ್ಯ) ಬಾರಿಸುವುದು, ಮತ್ತು ಸಾರಾಯಿ ಕುಡಿಯುವುದು ಎಂದರ ಪ್ರಾಣ. ಅವನಿಗೆ ದುಃಖವಾಗಲಿ ಖುಷಿಯಾಗಲಿ ಈ ಎರಡು ಇರಲೇಬೇಕು. ಈ ಕುಡಿತದ ಅಭ್ಯಾಸವನ್ನು ಅವನು ಬಿಡುತ್ತಾನೋ ಇಲ್ಲವೊ, ಸ್ವಂತ ವ್ಯವಸಾಯ ಮಾಡುವ ಕನಸು ನನಸಾಗುವುದೋ ಇಲ್ಲವೊ ಎನ್ನುವುದೇ ಈ ಚೋಮನ ದುಡಿ. ಕಾರಂತರು ಅವನ ಮತ್ತು ಅವನ ಮಕ್ಕಳ ಜೀವನದಲ್ಲಿ ನಡೆಯುವ ಘಟನೆಗಳ್ಳನ್ನು ವರ್ಣಿಸಿರುವರಿವ ರೀತಿ ನನಗೆ ಇಷ್ಟ ವಾಯಿತು. ಅಂತು ಒಂದು ಕಾದಂಬರಿಯನ್ನು ಓದಿ ಮುಗಿಸಿದೆ!

ಇದನ್ನು ಓದಿ ಮುಗಿಸಿ ಈಗ ಸುಮಾರು ದಿನಗಳು ಆಯಿತು. ಓದಿ ಆದ ನಂತರ good boy ಹಾಗೆ ಮಂಜುಗೆ ಅದ್ನ ರಿಟರ್ನ್ ಮಾಡ್ದೆ. ಅದನ್ನ ಹಿಂತಿರಿಗಿಸಿ ಇನ್ನೊಂದು ಪುಸ್ತಕ ಇಸ್ಕೊಂಡು ಬಂದೆ :) ಪೂರ್ಣಚಂದ್ರತೇಜಸ್ವಿ ಯವರ 'ಅಬಚೂರಿನ ಪೋಸ್ಟಾಫೀಸು' . ಇದು ಒಂದು ಕಥಾ ಸಂಕಲನ (ಕೆಲವು ಕಥೆಗಳ ಸಂಗ್ರಹ). ಇದರಲ್ಲಿ ಆಗಲೇ ಕೆಲವು ಕಥೆಗಳನ್ನೂ ಓದಿ ಮುಗಿಸಿದ್ದೇನೆ, ಇನ್ನು ಸ್ವಲ್ಪ ಓದಬೇಕು. ಬಿಡುವಾದಗಲ್ಲೇಲ ಓದುತ್ತ ಇದ್ದೇನೆ. ಮುಂಚೆ ಓದಲು ಅಷ್ಟು ಆಸಕ್ತಿ ಇರಲ್ಲಿಲ ಈಗ ನಿಧಾನವಾಗಿ ಓದುವ ಹವಾಸ್ಯ ಬೆಳೆಸಿಕೊಳ್ಳುತ್ತಿದ್ದೇನೆ. ಯಾರಾದರು ಈಗ ನಿನ್ನ hobbies ಏನು ಅಂದ್ರೆ, ಬಹುಷಃ ರೀಡಿಂಗ್ ನೋವೆಲ್ಸ್ ಅನ್ನಬಹುದು. ಈ ಹವ್ಯಾಸವನ್ನು ಎಷ್ಟು ಉಳಿಸಿಕೊಳ್ಳುತ್ತೇನೆ ಎನ್ನುವುದನ್ನು ಕಾದು ನೋಡಬೇಕು :)

3 comments:

Manjunath Singe said...

ಯಾರಿಗಾದ್ರು "ಓದೋದು" ಹವ್ಯಾಸ ಅಂತ ಹೇಳೋಕ್ ಮುಂಚೆ, ಅದರ ದಾರಿ ತೋರಿಸಿದ ಪಿತಾಮಹ "ನಮ್ಮ ಮಂಜು" ಅಂತ ಹೇಳು, ದೇವ್ರು ಒಳ್ಳೇದ್ ಮಾಡ್ತಾನೆ. :P

Unknown said...

your comment is very well sir , i also like it

Unknown said...

education gives quality of life
money gives quality of respect
wife gives quality of love
but friends gives quality of heart............................