Thursday, March 13, 2008

ಮೊದಲ ಹೆಜ್ಜೆ

ಮೊದಲ ಹೆಜ್ಜೆ ಅಂಥ ಟೈಟಲ್ ನೋಡಿ ಏನೋ ತುಂಬ ಸೀರಿಯಸ್ ವಿಷಯದ ಬಗ್ಗೆ ಬರೀತೀನಿ ಅಂಥ ದಯವಿಟ್ಟು ಅಪಾರ್ಥ ಮಾಡ್ಕೋಬೇಡಿ. ನನಗೋ ಮಾತಡೋಕ್ಕೆ ಇಷ್ಟ, ಅದು ತಲೆ ಬುಡ ಇಲ್ದೆಲೆ ಸುಮ್ನೆ ಏನಂದ್ರೆ ಅದೇ ಮಾತಾಡೋದ್ ಇಷ್ಟ. ಆದ್ರೆ ಜೊತೆಗೆ ಮಾತಾಡೋಕ್ಕೆ ಯಾರು ಸಿಗ್ಲವೇ..ಅದ್ಕೇ ಒಂದ್ ಒಂದ್ ಸಲಿ ಒಬೊಬ್ನೆ ಮಾತಾಡ್ತಾ ಇರ್ತೀನಿ. ಆ ತರ ಒಬೊಬ್ನೆ ಮಾತಾಡೋದ್ ಕಮ್ಮಿ ಮಾಡೋಣ ಅಂಥ ಈ ಐಡಿಯಾ ಮಾಡ್ದೆ. ನಂಗೆ ಸ್ವಲ್ಪ ಇಂಗ್ಲಿಷ್ ಪ್ರಾಬ್ಲಮ್(ಈ ಪದ 'ಇಂಗ್ಲಿಷ್ ಪ್ರಾಬ್ಲಮ್' ಡೆಡಿಕೇಟೆಡ್ ಟು ನಮ್ಮ ಬದ್ರಿ ಸರ್ :)). ಇಂಗ್ಲಿಷ್ ನಲ್ಲಿ ತಲೆ ತಿನೋಕ್ಕೆ ಬರಲ್ಲ ಅದ್ಕೇ ಕನ್ನಡ ಆರಿಸಿಕೊಂಡೆ. ಇನ್ಮೇಲೆ ಬೇಜಾರ್ ಆದಾಗ್ ಹಾಗೆ ಟೈಂಪಾಸ್ ಮಾಡೊಕ್ಕೆ ಎನ್ ನೆನಪಿಗೆ ಬಂದ್ರೆ ಅದ್ನ ಗೀಚ್ತಾ ಹೋಗ್ತೀನಿ ಇಲ್ಲಿ.

ನೀವ್ ಮುಂದೆ ಓದೋಕ್ಕೆ ಮುಂಚೆ ನೆ ಸ್ವಲ್ಪ ವಿಷ್ಯ ಗಳ್ಳನ್ನ ಕ್ಲಿಯರ್ ಮಾಡಿಬಿಡ್ತೀನಿ....ಫುಲ್ ಕನ್ನಡ ದಲ್ಲೇ ಅದು ಒಂದು ತಪಿಲ್ದಲೇ ಟೈಪ್ ಮಾಡ್ತೀನಿ ಅಂಥ ದಯವಿಟ್ಟು ಭಾವಿಸಬೇಡಿ. ಎಲ್ಲ ಲಾಂಗ್ವೇಜ್ ಮಿಕ್ಸ್ ಮಾಡಿ ಎನ್ ಬರತ್ತೋ ಅದ್ನ ಬರೀತೀನಿ. ಅಡ್ಜಸ್ಟ್ ಮಾಡ್ಕೊಳಿ. ಮತ್ತೆ ಇಲ್ಲಿ ವ್ಯಕ್ತ ಪಡಿಸುವ ಯಾವುದೇ ಅಭಿಪ್ರಾಯದ ಹಿಂದೆ ಯಾವ ದುರುದ್ದೇಷ ಆಗ್ಲಿ ಅಥವ ಸದುದ್ದೇಷ ಆಗ್ಲಿ ಇಲ್ಲ. ಇಲ್ಲಿ ಬರೆದಿರೋದನ್ನ ಓದಿ ಯಾರಗಾರೂ ಅಥವಾ ಏನಕಾದ್ರು ತೊಂದ್ರೆ ಆದ್ರೆ ನಾನು ಜವಾಬ್ದಾರಿ ಅಲ್ಲ :D . ಇಲ್ಲಿ ಬರಿಯೋ ವಿಷ್ಯನ ಅಷ್ಟೊಂದು ಸೀರಿಯಸ್ ಆಗಿ ತೊಗೋ ಬೇಡಿ. ಯಾಕಂದ್ರೆ ಆಮೇಲೆ ಯಾರೋ ಇದ್ನ ಓದಿ, ಅದ್ನ tv9 ಅವ್ರ್ಗೆ ಹೇಳಿ ಸಂಜೆ ನ್ಯೂಸ್ ನಲ್ಲಿ, " ಯಾರೋ ಓಬ್ಬ ಐಟಿ ಉದ್ಯೋಗಿ ತನ್ನ ಬ್ಲಾಗ್ ನಲ್ಲಿ ತಪ್ಪು ಕನ್ನಡ ಬರೆದಿದ್ದಾನೆ. ಮತ್ತೆ ಅದರ ಬಗ್ಗೆ ಇದರ ಬಗ್ಗೆ ಅಭಿಮಾನ ಇಲ್ದಲೇ ಏನೇನೋ ಬರೆದಿದ್ದಾನೆ " ಅಂಥ ನೋಡೋಕ್ಕೆ ನಂಗಂತೂ ಇಷ್ಟ ಇಲ್ಲ. :P. ಅವ್ರು ದಿನ ಇಡಿ ಅದೇ ನ್ಯೂಸ್ ಹಾಕ್ತಿರ್ತಾರೆ, ಆಮೇಲೆ ಅದ್ನ ನೋಡೋಕ್ಕೆ ನಿಮಗೂ ಬೋರ್ ಆಗುತ್ತೆ. ಅದ್ಕೇ ಇಲ್ಲಿ ಓದಿದನ್ನ ಇಲ್ಲೇ ಮರೆತ್ಬಿಡಿ :)

ಇಲ್ಲಿ ಹೆಚ್ಚಾಗಿ ಉಪಯೋಗ ಇಲ್ದಿರೊ ವಿಷ್ಯದ ಬಗ್ಗೆನೆ ಬರೀತೀನಿ. ಅವಗ್ ಅವಾಗ ಒಳ್ಳೆ ಟಾಪಿಕ್ ಬಗ್ಗೆ ನು ಬರಿಬಹುದು ಯಾರಿಗೊತ್ತು. ಏನರ ಬಗ್ಗೆ ಬರಿ ಬೇಕು ಅನ್ಸತ್ತೋ ಅದ್ನ ಬರಿತಾ ಹೋಗ್ತಿನಿ. ನಿಮ್ಗೆ ಬೇಜಾರ್ ಆದಾಗ ಅಯ್ಯೋ ಯಾರು ತಲೆ ತಿನ್ನೋರು ಇಲ್ವಲಾ ಅಂಥ ಅನ್ಸಿದ್ರೆ ಆಗ ಒಂದ್ ಸಲಿ ಇಲ್ಲಿಗೆ ವಿಸಿಟ್ ಕೊಡಿ. ನಿಮಗೂ ಟೈಂಪಾಸ್ ಆಗತ್ತೆ, ನಾನ್ ಕಷ್ಟ ಪಟ್ಟು ಕನ್ನಡ ದಲ್ಲಿ ಟೈಪ್ ಮಾಡಿದಕ್ಕೆ ಸಾರ್ಥಕ ಆಗುತ್ತೆ. ಟೈಮ್ ವೇಸ್ಟ್ ಮಾಡಿ ಓದೆ ಇರ್ಥಿರಂತೆ, ಹಾಗೆ ಎನ್ ಅನ್ಸಿತು ಅಂಥ ಒಂದ್ ಕಮೆಂಟ್ ಹಾಕಿ ಹೋಗಿ. ಅಟ್ಳೀಸ್ಟ ನೀವ್ ಓದಿದಿರ ಅಂಥ ನಾದ್ರು ಗೊತ್ತಾಗುತ್ತೆ ಜೊತೆಗೆ ನಂಗೆ ತಲೆ ತಿನ್ನೋ ಸ್ಟೈಲ್ ಇಂಪ್ರು ಮಾಡ್ಕೊಳಕ್ಕೆ ಸಹ ಹೆಲ್ಪ್ ಆಗುತ್ತೆ.

ಎನ್ ಮಾಡ್ತಿದ್ಯ ಮಲ್ಕೊಳೊ ಅಂಥ ಅಮ್ಮ ಕೂಗ್ತಿದಾರೆ, ನಂಗು ನಿದ್ದೆ ಬರ್ತಾ ಇದೆ..ಇವತ್ತಿಗೆ ಬ್ಲೇಡ ಹಾಕಿದ್ ಸಾಕು ಅನ್ಸುತ್ತೆ. ಸರಿ ಮತೆ, ವಿಷ್ಯ ಅಲ್ದೇ ಇರೋ ವಿಷ್ಯದ ಬಗ್ಗೆ ಯೋಚನೆ ಮಾಡೋತಂಕ ಬೈ. ನನ್ನ ಮೊದಲ ಹೆಜ್ಜೆ ಹೇಗಂಸ್ತು, ನಿವ್ ಹೇಳಿ ನಿಮ್ಮ ಪರ್ತಿಕ್ರಿಯೆ ನೋಡಿ ನನ್ನ ಮುಂದಿನ ಹೆಜ್ಜೆಗಳನ್ನ ಇಡ್ತೀನಿ :) ಬೈ.

2 comments:

Sudhindra Aithal said...

ಪಂಟ ಮಗ ನೀನು .. ಕನ್ನಡ ನ ಇಂಪ್ರೋವೆ ಮಾಡ್ಕೊಥ ಇಧ್ಯ ???

ನಿನ್ನ ಜೀವನ ದ ಜಿಗುಪ್ಸೆ ಬಗ್ಗೆ ಬರಿ ಮಗ :). ಇವಾಗ ಅಧು ಬಿಸಿ ಬಿಸಿ ತೋಪಿಕ್ ಅಲ್ವಾ :ದ

Santosh said...

no more jigupse n all...thats phase 1, I am already in phase 3 :)